ಜಂತರ್ ಮಂತರ್ - 
ದೆಹಲಿಯಲ್ಲಿರುವ ಪ್ರಸಿದ್ಧ ಖಗೋಳ ವೀಕ್ಷಣಾಲಯ. ಇದನ್ನು ಸುಪ್ರಸಿದ್ಧ ವಿಜ್ಞಾನಿ ಮತ್ತು ರಾಜನೀತಿಜ್ಞ ಜಯಪುರದ ಮಹಾರಾಜ ಎರಡನೆಯ ಸವಾಯಿ ಜಯಸಿಂಹ (1699-1743) 1724ರಲ್ಲಿ ನಿರ್ಮಿಸಿದ. ಬಾಲ್ಯದಿಂದಲೂ ಈತನಿಗೆ ಖಗೋಳಶಾಸ್ತ್ರದಲ್ಲಿ ಅಪಾರಾಸಕ್ತಿ. ಅದಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಧ್ಯಯನಿಸಿ ಪಾಂಡಿತ್ಯ ಗಳಿಸಿದ. ಆ ಕಾಲದಲ್ಲಿ ಬಳಕೆಯಲ್ಲಿದ್ದ ಖಗೋಳಶಾಸ್ತ್ರೀಯ ಕೋಷ್ಟಕಗಳಲ್ಲಿನ ಅನೇಕ ನ್ಯೂನತೆಗಳನ್ನು ಗಮನಿಸಿ ಅವನ್ನು ಸರಿಪಡಿಸಬೇಕೆಂಬ ಆಸೆ ಮೊಳೆಯಿತು. ಇದಕ್ಕಾಗಿ ಹಿಂದೂ, ಮುಸ್ಲಿಮ್ ಮತ್ತು ಯೂರೋಪಿಯನ್ ಪದ್ಧತಿಗಳ ಖಗೋಳಶಾಸ್ತ್ರಗ್ರಂಥಗಳನ್ನು ಅಭ್ಯಸಿಸಿದ. ಈ ಗ್ರಂಥಗಳಲ್ಲಿ ಮುಖ್ಯವಾದವನ್ನು ಸಂಸ್ಕøತ ಭಾಷೆಗೆ ಅನುವಾದಿಸಿದ. ಇದಕ್ಕಾಗಿ ಜಗನ್ನಾಥ ಮೊದಲಾದ ಪಂಡಿತರನ್ನು ನೇಮಿಸಿಕೊಂಡು, ಅವರಲ್ಲಿ ಕೆಲವರನ್ನು ಪಾಶ್ಚಾತ್ಯ ದೇಶಗಳಿಗೆ ಖಗೋಳಶಾಸ್ತ್ರದ ವಿಚಾರ ಹೆಚ್ಚಿನ ವಿಷಯಗಳನ್ನು ಸಂಗ್ರಹಿಸಲು ಕಳುಹಿಸಿದ ಕೂಡ. ವಿಜ್ಞಾನಗೋಷ್ಠಿಗಳನ್ನೇರ್ಪಡಿಸಿದ. ಖಗೋಳಶಾಸ್ತ್ರದಲ್ಲಿ ನಿಷ್ಕøಷ್ಟವಾದ ಪಾಂಡಿತ್ಯವನ್ನು ಸಂಪಾದಿಸಿ ಭಾರತದ ಮುಖ್ಯ ಸ್ಥಳಗಳಾದ ದೆಹಲಿ, ಜಯಪುರ, ಉಜ್ಜಯಿನಿ, ವಾರಾಣಸಿ(ಕಾಶಿ) ಮತ್ತು ಮಥುರಾ ನಗರಗಳಲ್ಲಿ ಖಗೋಳ ದೃಶ್ಯಗಳ ಸಮೀಕ್ಷಾ ಮಂದಿರಗಳ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದ. ಹೀಗೆ ನಿರ್ಮಿತವಾದ ಐದು ಖಗೋಳವೀಕ್ಷಣಾಲಯಗಳಲ್ಲಿ ದೆಹಲಿಯ ಜಂತರ್-ಮಂತರ್ ಮೊದಲನೆಯದು. ಇದು ಅಲ್ಲಿನ ಕನಾಟ್ ಸರ್ಕಸಿಗೆ ದಕ್ಷಿಣ ದಿಕ್ಕಿನಲ್ಲಿದೆ. 

ಅಕ್ಷಾಂಶ 28037' 35" ಉತ್ತರ
ರೇಖಾಂಶ 770 13' 5" ಪೂರ್ವ
ಸಮುದ್ರಮಟ್ಟದಿಂದ ಎತ್ತರ 695 ಅಡಿ

ಇದರಲ್ಲಿ ಖಗೋಳದೃಶ್ಯಗಳನ್ನು ಪರೀಕ್ಷಿಸಲು ನಿರ್ಮಿಸಲಾಗಿರುವ ಕಟ್ಟಡಗಳಿವು ; 
1. ಸಮ್ರಾಟ್ ಯಂತ್ರ (ಈಕ್ವಿನಾಕ್ಷಿಯಲ್ ಡಯಲ್)
2. ಜೈಪ್ರಕಾಶ್ : ಸಮ್ರಾಟ್ ಯಂತ್ರ ದಕ್ಷಿಣ ದಿಕ್ಕಿನಲ್ಲಿರುವ ಅರ್ಧ ಗೋಳಾಕಾರದ ಎರಡು ಕಟ್ಟಡಗಳು.
3. ರಾಮಯಂತ್ರ : ಜೈಪ್ರಕಾಶ್ ಯಂತ್ರದ ದಕ್ಷಿಣಕ್ಕಿರುವ ವೃತ್ತಾಕಾರದ ಎರಡು ದೊಡ್ಡ ಕಟ್ಟಡಗಳು.
4. ಮಿಶ್ರಯಂತ್ರ : ಸಮ್ರಾಟ್ ಯಂತ್ರದ ವಾಯುವ್ಯ ದಿಕ್ಕಿನಲ್ಲಿನಿರ್ಮಿತವಾಗಿರುವ ಕಟ್ಟಡ.
5. ಮಿಶ್ರ ಯಂತ್ರಕ್ಕೆ ನೈಋತ್ಯ ದಿಕ್ಕಿನಲ್ಲಿರವ ಎರಡು ಕಂಬಗಳು
6. ಮಿಶ್ರಯಂತ್ರದ ದಕ್ಷಿಣಕ್ಕಿರುವ ಅಳತೆ ಮಾಡಲು ಅನುಕೂಲವಾದ ಒಂದು ದೊಡ್ಡ ಜಗಲಿ.
1. ಸಮ್ರಾಟ್ ಯಂತ್ರ : ಇದು ದೃಕ್ಸಿದ್ಧಿ ಕಾಲವನ್ನು ಸೂಚಿಸುವ ಯಂತ್ರ. ಇದು ಈ ವೀಕ್ಷಣಾಲಯದ ಪ್ರಧಾನವಾದ ಮತ್ತು ಬೃಹದಾಕಾರದ ಕಲ್ಲು ಕಟ್ಟಡದಲ್ಲಿ ಉಂಟು. ಕಟ್ಟಡದ ಬಹುಭಾಗ ನೆಲದಡಿಯಲ್ಲಿದೆ. ಇದು 15 ಅಡಿ ಆಳ, ಪೂರ್ವ-ಪಶ್ಚಿಮ 725 ಅಡಿ, ಉತ್ತರ-ದಕ್ಷಿಣ 120 ಅಡಿ ಇರುವ ಚತುರ್ಭುಜಾಕೃತಿಯಲ್ಲಿ ನಿರ್ಮಿತವಾಗಿದೆ. ಈ ಕಟ್ಟಡದ ಒಟ್ಟು ಎತ್ತರ 68 ಅಡಿ. ಇದು ನೆಲಮಟ್ಟದಿಂದ 60.3 ಅಡಿ ಎತ್ತರವಾಗಿಯೂ ಉತ್ತರ-ದಕ್ಷಿಣ 113.3 ಅಡಿ, ಪೂರ್ವ-ಪಶ್ಚಿಮ 125 ಅಡಿ ವಿಸ್ತಾರವಾಗಿಯೂ ಇದೆ. ಎರಡು ತುದಿಗಳಲ್ಲೂ ಬಾಗಿರುವ ಬೃಹದಾಕಾರದ ಶಂಕು (ನೋಮನ್) ಮತ್ತು ಅದರ ಎರಡು ಪಕ್ಕಗಳಿಗೂ ಸೇರಿಕೊಂಡಿರುವ ವೃತ್ತಪಾದಾಕಾರದ (ಕ್ವಾಡ್ರಂಟ್) ಕಟ್ಟಡ ಈ ಯಂತ್ರದ ಮುಖ್ಯವಾದ ಭಾಗಗಳು. ಶಂಕುವಿನ ತುದಿಗಳು ಉತ್ತರಧ್ರವದಕಡೆಗಿದ್ದು, ಭೂಮಿಯ ಅಕ್ಷರೇಖೆಗೆ ಸಮಾಂತರವಾಗಿದೆ. ಇದರ ಇಬ್ಬದಿಯಲ್ಲಿ ವೃತ್ತಪಾದಾಕಾರದ ಕಟ್ಟಡಗಳಿವೆ. ಇವುಗಳ ತ್ರಿಜ್ಯ 49.5 ಅಡಿ. ವೃತ್ತಗಳ ಅಂಚುಗಳಲ್ಲಿ ಗಂಟೆ, ಡಿಗ್ರಿ ಮತ್ತು ಮಿನಿಟುಗಳನ್ನು ಗುರುತಿಸಲಾಗಿದೆ. ಉತ್ತರಕ್ಕಿರುವ ಅಂಚುಗಳಲ್ಲಿ ಇಂಗ್ಲಿಷ್ ಚಿಹ್ನೆಗಳೂ ದಕ್ಷಿಣದ ಅಂಚುಗಳಲ್ಲಿ ಹಿಂದೂ ಚಿಹ್ನೆಗಳು ಇವೆ. ಶಂಕುವಿನ ಕೊನೆಗಳನ್ನು ಟ್ಯಾಂಜೆಂಟುಗಳ ಮಾನಕಗಳಲ್ಲಿ ಗುರುತಿಸಿದೆ. ವೃತ್ತಪಾದಾಕಗಳ ಮೇಲೆ ಬಿದ್ದ ಶಂಕುವಿನ ತುದಿಯ ನೆರಳು ಸ್ಥಳೀಯ ಕಾಲವನ್ನು ಸುಚಿಸುತ್ತದೆ ಮತ್ತು ಇದರ ಸಹಾಯದಿಂದ ಸೂರ್ಯನ ಘಂಟಾವೃತ್ತಾಂಶವನ್ನು (ಡೆಕ್ಲಿನೇಷನ್) ತಿಳಿಯಬಹುದು.

	ಈ ಕಟ್ಟಡದ ಪೂರ್ವಭಾಗದಲ್ಲಿನ ವೃತ್ತ ಪಾದಾಕೃತಿಯ ಕೆಳಭಾಗದಲ್ಲಿರವ ಕೋಣೆಯಲ್ಲಿ ಷಷ್ಕಾಂಶವೆಂಬ ಒಂದು ಯಂತ್ರವಿದೆ. ಇದು ಮಧ್ಯಾಹ್ನರೇಖೆಗೆ ಸಮತಲವಾಗಿರುವ ಅಳತೆ ಗೆರೆಗಳಿಂದ ಕೂಡಿದ 600 ಉದ್ದದ ಒಂದು ವೃತ್ತ ಖಂಡಾಕೃತಿ. ಸೂರ್ಯ ಮಧ್ಯಾಹ್ನರೇಖೆಯನ್ನು ದಾಟುವಾಗ ಬೆಳಕು ವೃತ್ತಖಂಡಾಕೃತಿಯ ಮೇಲೆ ಬಿದ್ದು ಮಧ್ಯಾಹ್ನ ರೇಖೆಯ ಔನ್ನತ್ಯವನ್ನು ಸೂಚಿಸುತ್ತದೆ.

	ಇದರಿಂದ ಸೂರ್ಯನ ಘಂಟಾವೃತ್ತಾಂಶವನ್ನು ಸುಲಭವಾಗಿ ಅಳತೆಮಾಡಬಹುದು. 1910ರಲ್ಲಿ ಸಮೀಕ್ಷಾ ಮಂದಿರವನ್ನು ಜೀರ್ಣೋದ್ಧಾರ ಮಾಡಿದಾಗ ಈ ಕೋಣೆ ಮುಚ್ಚಿ ಹೋಯಿತು.

	ಸಮ್ರಾಟ್ ಯಂತ್ರದ ಶಂಕುವಿನ ತುದಿಯಲ್ಲಿ ವೃತ್ತಾಕಾರದ ಒಂದು ಕಂಬ ಉಂಟು. ಹಿಂದೆ ಇದನ್ನು ಕ್ಷಿತಿಜಾಂಶವನ್ನು (ಅಜಿóಮತ್) ತಿಳಿಯಲು ಉಪಯೋಗಿಸುತ್ತಿದ್ದಂತೆ ತೋರುತ್ತದೆ. ಆದರೆ ಈಗ ಈ ಕಂಬದ ಮೇಲೆ ಪಾಶ್ಚಾತ್ಯ ಮಾದರಿಯ ಒಂದು ಛಾಯಯಂತ್ರವನ್ನು (ಸನ್ ಡಯಲ್) ಇರಿಸಲಾಗಿದೆ. ಈ ಕಟ್ಟಡದ ಕೆಳಭಾಗ ಈಗ ಸಾಮಾನ್ಯವಾಗಿ 
ನೀರಿನಿಂದ ತುಂಬಿರುವುದು. ಕೆಲವು ವೇಳೆ ಶಂಕುವಿನ ಇಬ್ಬದಿಯಲ್ಲಿರುವ ವೃತ್ತ ಪಾದಾಕೃತಿಗಳೂ ನೀರಿನಿಂದ ಮುಚ್ಚಲ್ಪಟ್ಟಿರುತ್ತವೆ.

	2. ಜೈಪ್ರಕಾಶ್ ; ಸ್ಥಾನಿಕ ಕಾಲ. ಸಂಕ್ರಾತಿ ವೃತ್ತ ಮತ್ತು ಮಧ್ಯಾಹ್ನ ರೇಖೆಯ ಮೇಲಿನ ರಾಶಿಯನ್ನು ಸೂಚಿಸುವ ಯಂತ್ರ. ಇದು ಪರಸ್ಪರ ಪೂರಕವಾಗಿರುವ ನಿಮ್ನ ಗೋಳಾರ್ಧಗಳಿಂದ (ಕಾನ್ ಕೇವ್ ಹೆಮಿಸ್ಫಿಯರ್ಸ್) ಕೂಡಿದ್ದು ಸಮ್ರಾಟ್ ಯಂತ್ರದ ದಕ್ಷಿಣ ದಿಕ್ಕಿನಲ್ಲಿ ಸ್ಥಾಪಿತವಾಗಿದೆ. ಈ ಎರಡು ಗೋಳಾರ್ಧಗಳಿಗೂ ಅಡ್ಡವಾಗಿ, ಉತ್ತರ-ದಕ್ಷಿಣಾಭಿಮುಖವಾಗಿಯೂ ಪೂರ್ವ- ಪಶ್ಚಿಮಾಭಿಮುಖವಾಗಿಯೂ ಇರುವಂತೆ, ತಂತಿಗಳು ಕಟ್ಟಲ್ಪಟ್ಟಿವೆ. ಇವು ಪರಸ್ಪರ ಛೇದಿಸುವ ಸ್ಥಳದ ನೆರಳು ಗೋಳಾರ್ಧಗಳ ಒಳಬಾಗಿನ ಮೇಲೆ ಬಿದ್ದಾಗ ಅದು ಆ ವೇಳೆಯಲ್ಲಿ ಸೂರ್ಯನ ಸ್ಥಾನವನ್ನು ಸೂಚಿಸುತ್ತದೆ. ಗೋಳಾರ್ಧಗಳ ಮೇಲ್ಮೆ ಮೇಲೆ ಔನ್ನತ್ಯ ಮತ್ತು ಕ್ಷಿತಿಜಾಂಶವೃತ್ತಗಳನ್ನು ಗುರುತಿಸಿದೆ. ಇವುಗಳ ನೆರವಿನಿಂದ ಸೂರ್ಯನ ಸ್ಥಾನವನ್ನು ನೇರವಾಗಿ ತಿಳಿಯಬಹುದು. ರಾಶಿಚಕ್ರವು (ಜೊóೀಡಿಯಕ್) ಇದರ ಮೇಲೆ ಗುರುತು ಮಾಡಲ್ಪಟ್ಟು ಮಧ್ಯಾಹ್ನ ರೇಖೆಯ ಮೇಲಿನ ರಾಶಿ ಸೂರ್ಯನ ಬೆಳಕಿನಿಂದ ಸೂಚಿತವಾಗುತ್ತದೆ. ಈ ಯಂತ್ರಕ್ಕೆ ಕಟ್ಟಿದ ತಂತಿಗಳನ್ನು ಈಗ ತೆಗೆದುಬಿಟ್ಟಿದ್ದಾರೆ. ಆದರೆ ಅವನ್ನು ಕಟ್ಟುತ್ತಿದ್ದ 2 ಅಂಗುಲ ಉದ್ದದ ಕಬ್ಬಿಣದ ಕೊಳವೆಗಳು ಹಾಗೆಯೇ ಉಳಿದಿವೆ.

3. ರಾಮಯಂತ್ರ ; ಔನತ್ಯವನ್ನೂ ಕ್ಷಿತಿಜಾಂಶವನ್ನೂ ಸೂಚಿಸುವ ಯಂತ್ರ. ಇದು ಬೃಹದ್ವøತ್ತಾಕಾರದ ಪರಸ್ಪರ ಪೂರಕವಾದ ಎರಡು ಕಟ್ಟಡಗಳಿಂದ ಕೂಡಿದ್ದು ಜೈಪ್ರಕಾಶ್ ಯಂತ್ರದ ದಕ್ಷಿಣ ದಿಕ್ಕಿನಲ್ಲಿ ಸ್ಥಾಪಿತವಾಗಿದೆ. ಈ ಕಟ್ಟಡದ ಮಧ್ಯೆ 5 ಅಡಿ 61/2 ಅಂಗುಲ ವ್ಯಾಸವುಳ್ಳ ಒಂದು ಕಂಬ ಉಂಟು. ಕಟ್ಟಡದ ಒಳಗಿನ ನೆಲ ಮಟ್ಟದಿಂದ ಗೋಡೆಯ ಎತ್ತರ 24 ಅಡಿ 61/2 ಅಂಗುಲ. ಇದರ ಗೋಡೆ ಮತ್ತು ನೆಲದ ಮೇಲೆ ಕ್ಷಿತಿಜಾಂಶವೃತ್ತ ಮತ್ತು ಔನ್ನತ್ಯಗಳನ್ನು ತಿಳಿಯಲು ಸಹಾಯವಾಗುವಂತೆ ಅಳತೆ ಗೆರೆಗಳಿಂದ ಗುರುತು ಮಾಡಿದೆ. ಖಗೋಳದ ದೃಶ್ಯಗಳನ್ನು ಪರೀಕ್ಷಿಸಲು ಸುಗಮವಾಗಿರುವಂತೆ ಈ ಕಟ್ಟಡದ ನೆಲವನ್ನು 30 ಸಮಭಾಗಗಳಾಗಿ ವಿಂಗಡಿಸಿ ಪ್ರತಿವಿಭಾಗದ 30 ಸಮಭಾಗಗಳಾಗಿ ವಿಂಗಡಿಸಿ ಪ್ರತಿವಿಭಾಗದ ನಡುವಣ ಅಂತರ ವಿಭಾಗದ ಕೋನದಷ್ಟೆ ಅಂದರೆ 60 ಗಳಷ್ಟು ಇರುವಂತೆ ಮಾಡಲಾಗಿದೆ. ಮಾಡಲಾಗಿದೆ. ಅಳತೆಗೆರೆಗಳಿಂದ ಕೂಡಿರುವ ಗೋಡೆ ಸಹ ನೆಲದಂತೆಯೇ ಕಂಡಿಗಳಿಂದ ವಿಭಾಗಿಸಲ್ಪಟ್ಟಿದೆ. ಪ್ರತಿಯೊಂದು ಕಂಡಿಯ ಪಕ್ಕದಲ್ಲೂ ಇರುವ ಗಿ ಆಕಾರದ ಕಚ್ಚುವಿನಲ್ಲಿ ಖಗೋಳದ ದೃಶ್ಯಗಳನ್ನು ಗುರಿಯಿಟ್ಟು ನೋಡಲು ಸರಿಹೊಂದಿಸುವ ಸಲಾಕೆಗಳನ್ನು ಅಳವಡಿಸಲಾಗಿದೆ. ಆದರೆ ಸಲಾಕೆಗಳು ಈಗ ಕಾಣುತ್ತಿಲ್ಲ.

	4. ಮಿಶ್ರಯಂತ್ರ : ಸಮ್ರಾಟ್ ಯಂತ್ರಕ್ಕೆ ವಾಯುವ್ಯ ದಿಕ್ಕಿನಲ್ಲಿ ಸುಮಾರು 140 ಅಡಿ ದೂರದಲ್ಲಿ ನಿರ್ಮಿತವಾಗಿದೆ. ಇದು ನಿಯತಚಕ್ರ. ಚಿಕ್ಕ ಸಮ್ರಾಟ್ ಯಂತ್ರ ದಕ್ಷಿಣ ವೃತ್ತಯಂತ್ರ ಮತ್ತು ಕರ್ಕಾಟಕ ರಾಶಿವಲಯ ಎಂಬ ನಾಲ್ಕು ಯಂತ್ರಗಳಿಂದ ಕೂಡಿರುವುದರಿಂದ ಇದನ್ನು ಮಿಶ್ರ ಯಂತ್ರವೆಂದು ಕರೆಯಲಾಗಿದೆ.

	ನಿಯತಚಕ್ರ ಕಟ್ಟಡದ ಮಧ್ಯಭಾಗದಲ್ಲಿದೆ. ಒಂದು ಶಂಕು ಮತ್ತು ಅದರ ಎರಡು ಕಡೆಗಳಲ್ಲಿಯೂ ಸೇರಿಕೊಂಡಿರುವ ಅರ್ಧ ವೃತ್ತಾಕೃತಿಗಳು ಈ ಯಂತ್ರದ ಭಾಗಗಳು. ನಿಯತಚಕ್ರಕ್ಕೆ ಇಬ್ಬದಿಯಲ್ಲೂ ಅದಕ್ಕೆ ಕೂಡಿರುವಂತೆ ಒಂದು ಚಿಕ್ಕ ಸಮ್ರಾಟ್ ಯಂತ್ರವಿದೆ. ಈ ಕಟ್ಟಡದ ಪೂರ್ವ ದಿಕ್ಕಿಗೆ ಗೋಡೆಯ ಮೇಲೆ ಅಳತೆಗೆರೆಗಳಿಂದ ಗುರುತು ಮಾಡಲ್ಪಟ್ಟಿರುವ ಅರ್ಧವೃತ್ತಾಕಾರದ ದಕ್ಷಿಣ ವೃತ್ತಯಂತ್ರವಿದೆ. ಔನ್ನತ್ಯವನ್ನು ತಿಳಿಯಲು ಮಿಶ್ರಯಂತ್ರದ ಉತ್ತರ ದಿಕ್ಕಿನ ಗೋಡೆಯ ಮೇಲೆ ಅಳತೆಗೆರೆಗಳಿಂದ ಗುರುತಿಸಿರುವ ಒಂದು ದೊಡ್ಡ ವೃತ್ತ ಉಂಟು. ಇದನ್ನು ಕರ್ಕಾಟಕ ರಾಶಿವಲಯವೆನ್ನುತ್ತಾರೆ. ಮಿಶ್ರ ಯಂತ್ರದ ಮುಂದೆ 47 ಅಡಿ ಉದ್ದ ಮತ್ತು 43 ಅಡಿ ಅಗಲವಿರುವ ಒಂದು ದೊಡ್ಡ ಜಗಲಿಯಿದೆ. ಪ್ರಾಯಶಃ ಇದನ್ನು ಪ್ರಧಾನ ಕಟ್ಟಡಗಳು ನಿರ್ಮಾಣವಾಗುತ್ತಿದ್ದ ಕಾಲದಲ್ಲೋ ಅಥವಾ ಅವನ್ನು ಸರಿಪಡಿಸಿದ ಸಂದರ್ಭದಲ್ಲೋ ಅಳತೆ ಮಾಡಲು ಉಪಯೋಗಿಸುತ್ತಿದ್ದಂತೆ ಕಾಣುತ್ತದೆ. ಇದರ ಮೇಲೆ 20 ಅಡಿ ತ್ರಿಜ್ಯವುಳ್ಳ ಕಾಲು ವೃತ್ತಾಕಾರದ ಗುರುತಿದೆ. ಮಿಶ್ರ ಯಂತ್ರದಿಂದ ನೈಋತ್ಯ ದಿಕ್ಕಿನಲ್ಲಿ 17 ಅಡಿ ಅಂತರವಿರುವ ಎರಡು ಕಂಬಗಳಿವೆ.
(ಕೆ.ವಿ.ಎಸ್. ಎ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ